Listen to Mouna Thabbithu Nelava (From "Bhavalahari") by C Ashwath

Mouna Thabbithu Nelava (From "Bhavalahari")

C Ashwath

Kannada

Lyrics

ಮೌನ ಮೌನ ಮೌನ ತಬ್ಬಿತು ನೆಲವ ಝುಮ್ಮೆನೆ ಪುಳಕಗೊಂಡಿತು ಧಾರಿಣಿ ಮೌನ ತಬ್ಬಿತು ನೆಲವ ಝುಮ್ಮೆನೆ ಪುಳಕಗೊಂಡಿತು ಧಾರಿಣಿ ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ ಮೌನ ತಬ್ಬಿತು ನೆಲವ ಝುಮ್ಮೆನೆ ಪುಳಕಗೊಂಡಿತು ಧಾರಿಣಿ ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೇ ಸಡಿಲಿತು ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೇ ಸಡಿಲಿತು ಬೆಚ್ಚ ಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಬೆಚ್ಚ ಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಮೌನ ಮೌನ ಮೌನ ತಬ್ಬಿತು ನೆಲವ ಝುಮ್ಮೆನೆ ಪುಳಕಗೊಂಡಿತು ಧಾರಿಣಿ ಇರುಳ ಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನು ಇರುಳ ಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನು ನೆಲವು ತಣಿಯಿತು, ಬೆವರು ಹನಿಯಿತು ಭಾಷ್ಪ ನೆನೆಸಿತು ಹುಲ್ಲನು ನೆಲವು ತಣಿಯಿತು, ಬೆವರು ಹನಿಯಿತು ಭಾಷ್ಪ ನೆನೆಸಿತು ಹುಲ್ಲನು ಮೌನ ಮೌನ ಮೌನ ತಬ್ಬಿತು ನೆಲವ ಝುಮ್ಮೆನೆ ಪುಳಕಗೊಂಡಿತು ಧಾರಿಣಿ ಮೌನ ಉರುಳಿತು, ಹೊರಳಿತೆದ್ದಿತು ಗಾಳಿ ಭೋರನೆ ಬೀಸಿತು ಮೌನ ಉರುಳಿತು, ಹೊರಳಿತೆದ್ದಿತು ಗಾಳಿ ಭೋರನೆ ಬೀಸಿತು ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು ಹಾಯೆಂದು ಮೌನವು ಮಲಗಿತು ಹಾಯೆಂದು ಮೌನವು ಮಲಗಿತು
Writer(s): C. Ashwath, Dr. M. Gopalakrishna Adiga Lyrics powered by www.musixmatch.com
instagramSharePathic_arrow_out