Featured In

Credits

PERFORMING ARTISTS
Armaan Malik
Armaan Malik
Performer
Shreya Ghoshal
Shreya Ghoshal
Performer
COMPOSITION & LYRICS
Arjun Janya
Arjun Janya
Composer
Jayanth Kaikini
Jayanth Kaikini
Lyrics

Lyrics

ಮಾತಾಡು ನೀ ಹೃದಯದ ಮೌನ ಹೃದಯಕೆ ಸೀದಾ ತಲುಪುವ ಹಾಗೆ ಮಾತಾಡು ನೀ ಏನಾದರೂ ಮಾತಾಡು ನೀ ದೂರವೇ ನಿಂತು ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ ಕಾಣದಂತೇನೇ ಕಾದಿಟ್ಟ ಈ ಮೋಹ ಬಂತು ಹೊರಗೇತಕೆ ಮಿನು ಮಿನುಗಿದೆ ಕಣ್ಣುಗಳಲಿ ಸವಿಗನಸಿನ ಠೇವಣಿ ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ ಮಾತಾಡು ನೀ ಹೇಗಾದರೂ ಮಾತಾಡು ನೀ ಕಂಡ ಮಾತ್ರಕ್ಕೆ ನಾ ಸೋಲ ಬೇಕಿಲ್ಲ ಚೂರು ಪುಸಲಾಯಿಸು ಆಡದೇ ಇದ್ದ ಪ್ರೀತಿನೇ ಬಲು ಚಂದ ಧಾಟಿ ಬದಲಾಯಿಸು ಉಸಿರಿನ ಒಳ ಬೀದಿಗಳಲಿ ಪಿಸು ನುಡಿಗಳ ಸಂದಣಿ ನಸು ಬೆಳಕಲಿ ಮೀಯುತಿರುವ ತೀರದೊಡನೆ ತೆರೆಗಳಂತೆ ಮಾತಾಡು ನೀ ಇನ್ನಾದರೂ ಮಾತಾಡು ನೀ ಹೃದಯದ ಮೌನ ಹೃದಯಕೆ ಸೀದಾ ತಲಪುವ ಹಾಗೆ ಮಾತಾಡು ನೀ ಏನಾದರೂ ಮಾತಾಡು ನೀ
Writer(s): Arjun Janya, Jayanth Kaikini Lyrics powered by www.musixmatch.com
instagramSharePathic_arrow_out